2000 Notes: ನೀವು ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋದರೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಹಾಗಾದರೆ, ನಿಮ್ಮಲ್ಲಿರುವ ನೋಟುಗಳಿಗೆ ಬೆಲೆಯೇ ಇಲ್ವಾ? ಖಂಡಿತ ಇದೆ. ಈ ನೋಟುಗಳು…

ನಿಮ್ಮ ಪರ್ಸ್ ಅಥವಾ ಯಾವುದಾದರೂ ಹಳೆ ಪುಸ್ತಕದ ಮೂಲೆಯಲ್ಲಿ 2000 ರೂಪಾಯಿಯ ಗುಲಾಬಿ ನೋಟು ಇನ್ನೂ ಇದೆಯಾ? ಹಾಗಿದ್ರೆ, ಈ ಮಾಹಿತಿ ನಿಜವಾಗಿಯೂ ನಿಮಗಾಗಿಯೇ. ನಮ್ಮ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆದು ಒಂದು ವರ್ಷವೇ ಕಳೆದುಹೋಗಿದೆ, ಆದರೆ ಇನ್ನೂ ಸಾವಿರಾರು ಕೋಟಿ ಮೌಲ್ಯದ ನೋಟುಗಳು ಜನರ ಬಳಿಯೇ ಇವೆ.

ಆರ್‌ಬಿಐನ ಇತ್ತೀಚಿನ ವರದಿ ಪ್ರಕಾರ, ನಮ್ಮ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇಖಡ 98.31% ನೋಟುಗಳು ಈಗಾಗಲೇ ಬ್ಯಾಂಕ್‌ಗೆ ವಾಪಸ್ ಬಂದಿವೆ. ಆದರೆ, ಇನ್ನೂ ಸುಮಾರು ₹6,017 ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಜನರ ಬಳಿಯೇ ಉಳಿದುಕೊಂಡಿವೆ. ನಿಮ್ಮ ಮನೆಯಲ್ಲಿರುವ ನೋಟು ಕೂಡ ಇದರಲ್ಲಿ ಸೇರಿದ್ದರೆ, ಅದನ್ನು ಏನು ಮಾಡಬೇಕು? ಎಲ್ಲಿ ಬದಲಾಯಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ನಮ್ಮ ಯಾವುದೇ ಬ್ಯಾಂಕ್‌ಗಳಲ್ಲಿ ಈಗ ಬದಲಾವಣೆ ಇಲ್ಲ: ಮೊದಲನೆಯದಾಗಿ, ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ. ಅದು 9 ಅಕ್ಟೋಬರ್ 2023 ರಿಂದಲೇ, ಸಾಮಾನ್ಯ ಬ್ಯಾಂಕ್‌ಗಳಲ್ಲಿ 2000 ರೂಪಾಯಿ ನೋಟುಗಳನ್ನು ಠೇವಣಿ ಇಡುವುದನ್ನು ಅಥವಾ ವಿನಿಮಯ ಮಾಡುವುದನ್ನು ನಿಲ್ಲಿಸಲಾಗಿದೆ

ಆದರಿಂದ ನೀವು ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋದರೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಹಾಗಾದರೆ, ನಿಮ್ಮಲ್ಲಿರುವ ನೋಟುಗಳಿಗೆ ಬೆಲೆಯೇ ಇಲ್ವಾ? ಖಂಡಿತ ಇದೆ. ಈ ನೋಟುಗಳು ಸಹ ಇನ್ನೂ ಕಾನೂನುಬದ್ಧವಾಗಿವೆ, ಆದರೆ ಅವುಗಳನ್ನು ಬದಲಾಯಿಸಿಕೊಳ್ಳುವ ಮಾರ್ಗ ಮಾತ್ರ ಬೇರೆ ಇದೆ

ದೇಶದ ಪ್ರಮುಖ ನಗರಗಳಲ್ಲಿ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿವೆ. ನೀವು ನೇರವಾಗಿ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಿಗೆ ಹೋಗಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ದೇಶದ 19 ಪ್ರಮುಖ ನಗರಗಳಲ್ಲಿರುವ ಆರ್‌ಬಿಐ ಕಚೇರಿಗಳಲ್ಲಿ ಈ ಸೌಲಭ್ಯವಿದೆ. ಅಲ್ಲಿಗೆ ನಿಮ್ಮ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆ ವಿವರಗಳೊಂದಿಗೆ ಹೋದರೆ, ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡುತ್ತಾರೆ

ನಿಮ್ಮ ಹತ್ತಿರವಿರುವ ಅಂಚೆ ಕಚೇರಿ (Post Office) ಮೂಲಕ ಸಹ ಮಾಡಬಹುದು. ಒಂದು ವೇಳೆ ಈ ಆರ್‌ಬಿಐ ಕಚೇರಿಗಳು ನಿಮ್ಮ ಊರಿನಲ್ಲಿ ಇಲ್ಲದಿದ್ದರೆ, ಚಿಂತೆ ಬೇಡ. ನಿಮ್ಮ ಹತ್ತಿರದ ಅಂಚೆ ಕಚೇರಿ ಮೂಲಕವೂ ಈ ನೋಟುಗಳನ್ನು ವಿಮೆಯೊಂದಿಗೆ (Insured Post) ಆರ್‌ಬಿಐಗೆ ಕಳುಹಿಸಬಹುದು. ಸರಿಯಾದ ಫಾರ್ಮ್ ತುಂಬಿ, ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರೆ, ಆರ್‌ಬಿಐ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ.

ಯಾಕೆ ಈ ನಿರ್ಧಾರ? ಎನ್ನಿಸಬಹುದು. ಇದು ನೋಟ್ ಬ್ಯಾನ್ ಅಲ್ಲ, ಬದಲಿಗೆ ಆರ್‌ಬಿಐನ “ಕ್ಲೀನ್ ನೋಟ್ ಪಾಲಿಸಿ”ಯ ಒಂದು ಭಾಗ. ಹಳೆಯ, ಹಾಳಾದ ನೋಟುಗಳನ್ನು ಸಿಸ್ಟಮ್‌ನಿಂದ ತೆಗೆದುಹಾಕುವುದು ಇದರ ಉದ್ದೇಶ. 2018-19ರ ನಂತರ 2000 ರೂಪಾಯಿ ನೋಟುಗಳ ಮುದ್ರಣವನ್ನೇ ನಿಲ್ಲಿಸಲಾಗಿತ್ತು. ಈಗ ₹100, ₹200, ₹500 ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರಿಂದ, ಈ ದೊಡ್ಡ ನೋಟಿನ ಅವಶ್ಯಕತೆಯು ಕಡಿಮೆಯಾಗಿದೆ.
ಇಲ್ಲಿ ಪ್ರಮುಖವಾಗಿ ದೇಶದ ಆರ್ಥಿಕವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು.. ನಿಮ್ಮ ಬಳಿ ಯಾವುದೇ 2000 ಮುಖಬೆಲಿಯ ನೋಟ್ ಇದ್ದಾರೆ ದಯವಿಟ್ಟು ಬದಲಾಯಿಸಿಕೊಳ್ಳಿ. ಯಾಕೆಂದರೆ ಸುಮಾರು 6017 ಕೋಟಿ ರೂ ಮೌಲ್ಯ ದ ನೋಟುಗಳು ಇನ್ನೂ RBI ಗೆ ತಲುಪಿಲ್ಲ..
