SBI ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2964 ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಇದೆ ಮೇ 9 ರಿಂದ ಮೇ 29 ರವರೆಗೆ ಅರ್ಜಿ ಸಲ್ಲಿಸಲು ಆವಕಾಶವಿರುತ್ತದೆ. ಯಾರೆಲ್ಲಾ ಪದವೀಧರರಾಗಿದ್ದೀರೋ ಅವರಿಗೊಂದು ಉತ್ತಮ ಆವಕಾಶವಿದು. ಅಭ್ಯರ್ಥಿಯಾ ವಯಸ್ಸು 21-30 ವರ್ಷಗಳಾಗಿರಬೇಕು. ಸಾಮಾನ್ಯ General OBC, ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿದೆ 750 ರೂ. ಆಯ್ಕೆಮಾಡುವ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನೆಡೆಯುತ್ತದೆ.
ಈಗಾಗಲೇ ಪದವಿ ಮುಗಿದ ನಂತರ ಸರ್ಕಾರಿ ಕೆಲಸ ಅಥವಾ ಬ್ಯಾಂಕ್ ಗಳಲ್ಲಿ ಕೆಲಸ ಮಾಡಬೇಕೆಂದು ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೊಂದು ಉತ್ತಮ ಆವಕಾಶ ತಪ್ಪದೆ ಸದುಪಯೋಗ ಪಡೆಸಿಕೊಳ್ಳಿ. (SBI) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳ ನೇಮಾಕಾತಿಗೆ ಅಧಿಸೂಚನೆಯನ್ನುಹೊರಡಿಸಳಾಗಿದೆ . ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು, ಮೇ 9 ರಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡುವ ಮೂಲಕ ಮೇ 29 ರವರೆಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಒಟ್ಟು 2964 ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು,ಪೂರ್ವ ಸಿದ್ದತೆಗಳು ಹಾಗೂ ಅಭ್ಯರ್ಥಿಗಳಿಗೆ ಎಸ್‌ಬಿಐ ಹೊರಡಿಸಿದ ಖಾಲಿ ಹುದ್ದೆಯ ಬಗ್ಗೆ ಪರಿಪೂರ್ಣವಾಗಿ ತಿಳಿದುಕೊಳ್ಳಿ

SBI CBO ಸರ್ಕಲ್ ಬೇಸ್ಡ್ ಆಫೀಸರ್ ನೇಮಕಾತಿ ಅರ್ಹತೆಗಳು
sbi ಎಸ್‌ಬಿಐ ಸರ್ಕಲ್ ಬೇಸ್ಡ್ ಆಫೀಸರ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್ ಮುಂತಾದ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಇಲ್ಲಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 21 ರಿಂದ 30 ವರ್ಷಗಳ ನಡುವೆ ಇರಬೇಕು. ವಯಸ್ಸನ್ನು ಏಪ್ರಿಲ್ 30, 2025 ರಿಂದ ಲೆಕ್ಕಹಾಕಲಾಗುತ್ತದೆ.
ಅರ್ಜಿಯ ಶುಲ್ಕ ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಆದರೆ ವಿಕಲಚೇತನ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
SBI CBO ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನ ?
- ಬ್ಯಾಂಕಿನ ಅಧಿಕೃತ ವೆಬ್‌ಸೈಟ್ sbi.co.in ಗೆ ಭೇಟಿ ನೀಡಿ.
- ಮುಖಪುಟದಲ್ಲಿ ನೀಡಿರುವ ವೃತ್ತಿ ವಿಭಾಗಕ್ಕೆ ಹೋಗಿ.
- SBI CBO ನೇಮಕಾತಿ 2025 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಫಾರ್ಮ್ ಅನ್ನು ಭರ್ತಿ ಮಾಡಿದ ಬಳಿಕ ದಾಖಲೆಗಳನ್ನು (education certificate aadhar pan) ಅಪ್‌ಲೋಡ್ ಮಾಡಿ, ಶುಲ್ಕವನ್ನು ಪಾವತಿಸಿ ಮತ್ತು ಸಲ್ಲಿಸಿ.
ಆಯ್ಕೆ ನೆಡೆಯುವ ವಿಧಾನ ?
sbi job ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿದಾರರ ಆಯ್ಕೆಯನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಮಾಡಲಾಗುತ್ತದೆ. ಪರೀಕ್ಷೆಯನ್ನು CBT ಮೋಡ್‌ನಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್ ಜ್ಞಾನ, ಸಾಮಾನ್ಯ ಅರಿವು ಮತ್ತು ಕಂಪ್ಯೂಟರ್ knowledge ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಹೊರಡಿಸಿದ ಅಧಿಸೂಚನೆಯನ್ನು ಪರಿಶೀಲಿಸಬಹುದು.
