WhatsApp Group Join Now
Telegram Group Join Now
Instagram Group Join Now

ದಯವಿಟ್ಟು ಇನ್ನುಮುಂದೆ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಚಾಲು ಇರುವಂತೆ ನೋಡಿಕೊಳ್ಳಿ…Ration Card  Karnataka: ರೇಷನ್‌ ಪಡೆಯಲು ಇನ್ಮುಂದೆ OTP ಇದ್ದರೆ ಸಾಕು…ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್!

ಕರ್ನಾಟಕ ಸರ್ಕಾರವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸಲು ಹೊಸ ಬದಲಾವಣೆಯನ್ನು ಜಾರಿಗೆ ತರಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನು ಮುಂದೆ ಫಲಾನುಭವಿಗಳಿಗೆ ಮಾಸಿಕ ಪಡಿತರ ವಿತರಣೆ ಮಾಡುವಾಗ ಒನ್ ಟೈಮ್ ಪಾಸ್‌ವರ್ಡ್ (OTP) ಆಧಾರಿತ ವ್ಯವಸ್ಥೆಯನ್ನು ಬಳಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ದೊಡ್ಡ ಮಟ್ಟದ ಇದು ನೆರವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದಲ್ಲಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಲ್ಲಿ  ಈ otp ವ್ಯವಸ್ಥೆ ಬರುವುದು  ಇಲ್ಲಿಯವರೆಗೂ ಅಕ್ಕಿ, ಗೋಧಿ ಸೇರಿದಂತೆ ಇತರ ಆಹಾರ ಧಾನ್ಯಗಳನ್ನು ಪಡೆಯಲು ಫಲಾನುಭವಿಗಳು ತಮ್ಮ ಬೆರಳಚ್ಚು ನೀಡಿ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕಾಗಿದೆ. ಆದರೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಸರಿಯಾಗಿ ಲಭ್ಯವಿಲ್ಲ. ಇದರಿಂದಾಗಿ ಬಯೋಮೆಟ್ರಿಕ್ ಯಂತ್ರಗಳು ಕೆಲಸ ಮಾಡದೇ ಫಲಾನುಭವಿಗಳು ಪಡಿತರ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಜೊತೆಗೆ, ವೃದ್ಧರು, ಕೂಲಿ ಕಾರ್ಮಿಕರು ಹಾಗೂ ಶಾರೀರಿಕ ಶ್ರಮ ಮಾಡುವವರಲ್ಲಿ ಬೆರಳಚ್ಚು ಸ್ಪಷ್ಟವಾಗದೇ ಇರುವ ಸಮಸ್ಯೆ ಹೆಚ್ಚಾಗಿತ್ತು. ಈ ಎಲ್ಲ ಅಡಚಣೆಗಳನ್ನು ನಿವಾರಿಸುವ ಉದ್ದೇಶದಿಂದ OTP ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಸೆನ್ಸೆಕ್ಸ್ 81,909.63 -0.33% ನಿಫ್ಟಿ 25,157.50 -0.30% ಚಿನ್ನ ₹ 14,356 /gm ಬೆಳ್ಳಿ ₹ 3,30,100/kg ಪೆಟ್ರೋಲ್ ₹ 102.92 ಡೀಸೆಲ್ ₹ 90.99 ಕಚ್ಚಾ ತೈಲ $65.32 USD ₹ 91.61 ಸೆನ್ಸೆಕ್ಸ್ 81,909.63 -0.33% ನಿಫ್ಟಿ 25,157.50 -0.30% ಚಿನ್ನ ₹ 14,356 /gm ಬೆಳ್ಳಿ ₹ 3,30,100/kg ಪೆಟ್ರೋಲ್ ₹ 102.92 ಡೀಸೆಲ್ ₹ 90.99 ಕಚ್ಚಾ ತೈಲ $65.32 USD ₹ 91.61 Get Updates Get notified about market trends, financial advice, and investment tips! Notifications Get Updates Get notified about market trends, financial advice, and investment tips! ಸುದ್ದಿಜಾಲ Ration Card Karnataka: ರೇಷನ್‌ ಪಡೆಯಲು ಇನ್ಮುಂದೆ OTP ಸಾಕು…ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್‌ನ್ಯೂಸ್! By Latha M R Published: Sunday, January 18, 2026, 16:55 [IST] Share This Article ಕರ್ನಾಟಕ ಸರ್ಕಾರವು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಲು ಹೊಸ ಬದಲಾವಣೆಯನ್ನು ಜಾರಿಗೆ ತರಲು ಮುಂದಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನು ಮುಂದೆ ಫಲಾನುಭವಿಗಳಿಗೆ ಮಾಸಿಕ ಪಡಿತರ ವಿತರಣೆ ಮಾಡುವಾಗ ಒನ್ ಟೈಮ್ ಪಾಸ್‌ವರ್ಡ್ (OTP) ಆಧಾರಿತ ವ್ಯವಸ್ಥೆಯನ್ನು ಬಳಸಲು ತೀರ್ಮಾನಿಸಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಈಗಾಗಲೇ ಬಯೋಮೆಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸಾವಿರಾರು ಜನರಿಗೆ ದೊಡ್ಡ ಮಟ್ಟದ ನೆರವಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. Stay updated with the latest Budget news ಸದ್ಯದಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ಅಕ್ಕಿ, ಗೋಧಿ ಸೇರಿದಂತೆ ಇತರ ಆಹಾರ ಧಾನ್ಯಗಳನ್ನು ಪಡೆಯಲು ಫಲಾನುಭವಿಗಳು ತಮ್ಮ ಬೆರಳಚ್ಚು ನೀಡಿ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕಾಗಿದೆ. ಆದರೆ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಸರಿಯಾಗಿ ಲಭ್ಯವಿಲ್ಲ. ಇದರಿಂದಾಗಿ ಬಯೋಮೆಟ್ರಿಕ್ ಯಂತ್ರಗಳು ಕೆಲಸ ಮಾಡದೇ ಫಲಾನುಭವಿಗಳು ಪಡಿತರ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಜೊತೆಗೆ, ವೃದ್ಧರು, ಕೂಲಿ ಕಾರ್ಮಿಕರು ಹಾಗೂ ಶಾರೀರಿಕ ಶ್ರಮ ಮಾಡುವವರಲ್ಲಿ ಬೆರಳಚ್ಚು ಸ್ಪಷ್ಟವಾಗದೇ ಇರುವ ಸಮಸ್ಯೆ ಹೆಚ್ಚಾಗಿತ್ತು. ಈ ಎಲ್ಲ ಅಡಚಣೆಗಳನ್ನು ನಿವಾರಿಸುವ ಉದ್ದೇಶದಿಂದ OTP ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. Also Read Union Budget 2026-Free Ration Scheme: 2026ರ ಬಜೆಟ್‌ನಲ್ಲಿ ರೇಷನ್‌ ಕಾರ್ಡ್‌ನಲ್ಲಾಗುತ್ತಾ ಭಾರೀ ಬದಲಾವಣೆ! ಬಡವರಿಗೆ ಸಿಹಿಸು ಹೊಸ ವ್ಯವಸ್ಥೆಯಡಿ ಫಲಾನುಭವಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ ಕಳುಹಿಸಲಾಗುತ್ತದೆ. ಆ OTP ಅನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡುವುದರ ಮೂಲಕ ಪಡಿತರವನ್ನು ಸುಲಭವಾಗಿ ಪಡೆಯಬಹುದು. ಇದರಿಂದ ಬಯೋಮೆಟ್ರಿಕ್ ಅವಲಂಬನೆ ಕಡಿಮೆಯಾಗುವುದರ ಜೊತೆಗೆ, ಪಡಿತರ ವಿತರಣೆಯಲ್ಲಿ ವಿಳಂಬ ಮತ್ತು ತೊಂದರೆಗಳು ಕಡಿಮೆಯಾಗಲಿವೆ. ವಿಶೇಷವಾಗಿ ವೃದ್ಧರು, ಅಂಗವಿಕಲರು ಮತ್ತು ತಾಂತ್ರಿಕ ಸಮಸ್ಯೆ ಎದುರಿಸುವವರು ಈ ವ್ಯವಸ್ಥೆಯಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಜಂಟಿ ನಿರ್ದೇಶಕ ಪಿ. ಶಿವಣ್ಣ ಅವರ ಪ್ರಕಾರ, ಈ ಕ್ರಮದಿಂದ ಪಡಿತರ ವಿತರಣಾ ವ್ಯವಸ್ಥೆ ಇನ್ನಷ್ಟು ಸುಗಮವಾಗಲಿದೆ. ಸರ್ಕಾರದ ಉದ್ದೇಶ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಇಲ್ಲದೆ ಆಹಾರ ಧಾನ್ಯ ತಲುಪಿಸುವುದಾಗಿದೆ. OTP ವ್ಯವಸ್ಥೆ ಜಾರಿಯಾದ ಬಳಿಕ ವಂಚನೆಗೂ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಜೊತೆಗೆ, ಬಿಪಿಎಲ್ ಕಾರ್ಡ್ ವಿತರಣೆಯ ಕುರಿತಂತೆ ಮಾಹಿತಿಯನ್ನು ಇಲಾಖೆ ಹಂಚಿಕೊಂಡಿದೆ. ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಮಾತ್ರವೇ 7,456 ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಒಟ್ಟು 15,739 ಜನರು ಹೊಸ ಬಿಪಿಎಲ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನೆಯ ನಂತರ 605 ಅರ್ಜಿಗಳನ್ನು ಅರ್ಜಿದಾರರೇ ಹಿಂಪಡೆದಿದ್ದು, ಅರ್ಹತೆ ಇಲ್ಲದ ಕಾರಣ 760 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದ ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗಿದೆ.

ಒಟ್ಟಿನಲ್ಲಿ, OTP ಆಧಾರಿತ ಪಡಿತರ ವಿತರಣಾ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸರ್ಕಾರ ಕೈಗೊಂಡಿರುವ ಈ ಹೊಸ ಕ್ರಮದಿಂದ ಪಡಿತರ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚುವುದರ ಜೊತೆಗೆ, ನಿಜವಾದ ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಆಹಾರ ಧಾನ್ಯ ದೊರಕುವಂತಾಗಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ಮಹತ್ವದ ಬದಲಾವಣೆ ಆಗಲಿದೆ.

ಸರ್ಕಾರದ ಕೆಲವು ನಿರ್ಧಾರಗಳು ಜನರಿಗೆ ಸೌಲಭ್ಯ ಪೂರಕವಾಗಿವೆ.. ದಯವಿಟ್ಟು ಇನ್ನುಮುಂದೆ ನಿಮ್ಮ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಚಾಲು ಇರುವಂತೆ ನೋಡಿಕೊಳ್ಳಿ…

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading