WhatsApp Group Join Now
Telegram Group Join Now
Instagram Group Join Now

ಎಣ್ಣೆ ನಿಮ್ದೂ ಊಟ ನಮ್ದೂ .. ಮತ್ತೊಮ್ಮೆ ಮದ್ಯದ ದರ ಏರಿಕೆ ಪ್ರತಿ ಕ್ವಾರ್ಟರ್‌ಗೆ ₹15 ಹೆಚ್ಚಳಎಣ್ಣೆ ನಿಮ್ದೂ ಊಟ ನಮ್ದೂ ಕರ್ನಾಟಕದಲ್ಲಿ

Swamy world

ಬೆಂಗಳೂರು : ನಮ್ಮ ರಾಜ್ಯ ಸರ್ಕಾರ ಇತ್ತೀಚೆಗೆ ಡೀಸೆಲ್ ತೆರಿಗೆ ಮತ್ತು, ವಿದ್ಯುತ್ ದರ ಹಾಗೂ ಹಾಲಿನ ಬೆಲೆಗಳನ್ನು ಹೆಚ್ಚಿಸಿದ ಬೆನ್ನಲ್ಲೇ, ಈದಿಗಾ ಮದ್ಯದ ಮೇಲೆ ಅದು 4ನೇ ಬಾರಿಗೆ ದರ ಏರಿಕೆ ಮಾಡಲು ಮುಂದಾಗಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಘೋಷಿಸಿದ್ದರೂ, ಅಧಿಕೃತ ಅಧಿಸೂಚನೆಯನ್ನು ಮಂಗಳವಾರ ಸಂಜೆ ಮದ್ಯ ಅಬಕಾರಿ ಇಲಾಖೆಯು ಬಿಡುಗಡೆ ಮಾಡಿದೆ. ಎಣ್ಣೆ ಕುಡಿಯುವರಿಗೆ ಇದು ಬರೆ..

ಒಂದು ರೀತಿಯಲ್ಲಿ ಹೇಳುವುದಾದರೆ ನಮ್ಮ ರಾಜ್ಯ ಸರ್ಕಾರವು

ಎಲ್ಲ ಬಾರ್‌ಗಳನ್ನು ಬ್ಯಾಂಕ್ ಎಟಿಎಂ ಮಾಡಿಕೊಂಡಿರುವಂತೆ ಇದೆ.  ಸರ್ಕಾರ ಇದೀಗ ಮದ್ಯದ ಮಾರಾಟದಿಂದ ಸುಮಾರು 40,000 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಹೊಂದಿದೆ.

ನಿಮಗೆ ಗೊತ್ತೇ? ನಮ್ಮ ರಾಜ್ಯದಲ್ಲಿ ಅತಿಹೆಚ್ಚಿನ ಜನರು ಕುಡಿಯುವ ಹಾಗೂ ಮದ್ಯಮ ವರ್ಗದ ಬೆಲೆಯನ್ನು ಹೊಂದಿರುವ ಮದ್ಯಗಳ ದರವನ್ನು ಹೆಚ್ಚಳ ಮಾಡಲು ಮುಂದಾಗಿದೆ. ಬ್ರಾಂಡಿ, ವಿಸ್ಕಿ, ರಮ್, ಜಿನ್ (Brandy, Whisky, Rum, Gin) ಮುಂತಾದ ಮದ್ಯಗಳ ದರವನ್ನು ಪ್ರತಿ ಕ್ವಾರ್ಟರ್‌ಗೆ ₹10 ರಿಂದ ₹15 ರವರೆಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಇನ್ನು ಬಿಯರ್‌ ದರವನ್ನು ಎಲ್ಲಾ ವರ್ಗಗಳಲ್ಲಿ 10% ರಷ್ಟು ಹೆಚ್ಚಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಮಧ್ಯಮ ವರ್ಷದ ಮದ್ಯಕ್ಕೂ ತುಸು ಪ್ರಮಾಣದಲ್ಲಿ ದರ ಏರಿಕೆ ಆಗಲಿದೆ. ಆದರೆ, ಮತ್ತೊಂದು ವಿಷೇಶ ಏನೇಂದರೆ ಹೈ ಎಂಡ್ (ಅಥವಾ ಪ್ರೀಮಿಯಂ ಬ್ರ್ಯಾಂಡ್) ಮದ್ಯಗಳ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ವೈನ್, ಫಣ್ಣಿ ಸೇರಿದಂತೆ ಕೆಲವು ಮದ್ಯಗಳನ್ನು ದರ ಏರಿಕೆಯಿಂದ ಹೊರಗಿಡಲಾಗಿದೆ.

ಈ ನಿರ್ಧಾರಕ್ಕೆ ಮುಖ್ಯ ಕಾರಣೇ? ಆರ್ಥಿಕ ಅರಿವು ಇಲ್ಲದೆ ಇರುವುದು ಹಣ ದುಂದು ವೆಚ್ಚ ಹಾಗೂ ಉಚಿತ ಕಾರ್ಯಕ್ರಮಗಳು..

ನಿಮಗೆ ಬೆಲೆ ಜಾಸ್ತಿಯಾಗಿದೆ ಎನ್ನುವುದಾದರೆ ಸೇವನೆ ಮಾಡುವುದನ್ನು ನಿಲ್ಲಿಸಿ..

ನಿಮಗೆ ಇದು ತಪ್ಪು ಅನಿಸಿದರೆ ಇನ್ನು ಈ ಹೊಸ ದರ ಏರಿಕೆ ಅಧಿಸೂಚನೆ ಬಿಡುಗಡೆಯಾದ ದಿನದಿಂದ ಆರಂಭವಾಗಿ ನಾಗರಿಕರಿಗೆ 7 ದಿನಗಳ ಅವಧಿ ಅಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂಧನ, ಹಾಲು, ವಿದ್ಯುತ್, ಬಸ್, ಮೆಟ್ರೋ ಪ್ರಯಾಣ ದರ, ಪ್ರಮಾಣ ಪತ್ರಗಳ ಸೇವಾ ಶುಲ್ಕ ಸೇರಿ ಒಟ್ಟಾರೆಇಲ್ಲಿಯಾವರೆಗೂ 45ಕ್ಕೂ ಅಧಿಕ ವಸ್ತುಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಇದೀಗ ಪುನಃ 4ನೇ ಬಾರಿಗೆ ಮದ್ಯದ ದರ ಏರಿಕೆ ಮಾಡಲು ಮುಂದಾಗಿದೆ…. ಇನ್ನೂ ಮುಂದಿನ ದಿನಗಳಲ್ಲಿ ಯಾವ ಯಾವ ವಸ್ತುಗಳು ಅಥವಾ ದಿನನಿತ್ಯದ ಬಳಕೆಗಳ ಮೇಲೆ ಬೆಲೆ ಏರಿಕೆಯಾಗುತ್ತದೆ ಎಂಬುದನ್ನು ಕಾದು ನೋಡಬೇಕು..

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading