WhatsApp Group Join Now
Telegram Group Join Now
Instagram Group Join Now

ಲಾಯರ್ ಜಗದೀಶ್ 93 ದಿನಗಳ ನಂತರ ಜೈಲಿನಿಂದ ಬಿಡುಗಡೆ..

ಜಗದೀಶ್

ನಮ್ಮ ರಾಜ್ಯದಲ್ಲಿ ಕೆಲವೊಂದು ವಿಷಯಗಳಲ್ಲಿ ಅದು ಸಾಮಾಜಿಕ ಕಳಕಳಿ ಬದ್ದತೆಗೆ ಹೋರಾಟ ಮಾಡಿರುತ್ತಾರೆ.

ಬೆಂಗಳೂರು: ಮಾಜಿ ಬಿಗ್‌ಬಾಸ್ (Bigg Boss) ಸ್ಪರ್ಧಿ,

ವಕೀಲ ಜಗದೀಶ್ (Lawyer Jagadish) 93 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಕೊನೆಯದಾಗೆ ಜಾಮೀನು ಪಡೆದು ಹೊರಬಂದಿದ್ದಾರೆ.

ಇವರ ಬಂಧನ ಮಾಡಿದ್ದು ಯಾಕೆ ಗೊತ್ತ?

ಇದೇ ವರ್ಷದ ಆರಂಭದಲ್ಲಿ ಜಗದೀಶ್ ನಿವಾಸವಿರುವ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿ ಉತ್ಸವದ ವಿಚಾರವಾಗಿ ಸ್ಥಳೀಯರ ಜೊತೆ ಗಲಾಟೆ ಆಗಿತ್ತು. ಜಗದೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದೇ ಸಮಯದಲ್ಲಿ ಜಗದೀಶ್ ಅವರ ಕಾರಿನ ಮೇಲೂ ಕೆಲವರು ದಾಳಿ ಮಾಡಿದ್ದರು.

ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಜಗದೀಶ್ ಅವರು ಕಾನೂನು ಬಾಹಿರವಾಗಿ ಬಂದೂಕು ಬಳಕೆ ಮಾಡಿದ್ದರು. ಜಗದೀಶ್ ಅವರ ಬಳಿಯಿದ್ದ ಬಂದೂಕನ್ನು ಉತ್ತರ ಪ್ರದೇಶದಲ್ಲಿ ಮಾತ್ರ ಬಳಕೆ ಮಾಡಬಹುದಿತ್ತು. ಅಲ್ಲಿ ಮಾತ್ರ ಬಳಸಲು ಲೈಸೆನ್ಸ್‌ ಪಡೆದಿದ್ದ ಬಂದೂಕನ್ನು ಕೊಡಿಗೇಹಳ್ಳಿಯಲ್ಲಿ ಬಳಸಲಾಗಿತ್ತು. ಇದೇ ಕಾರಣಕ್ಕಾಗಿ  ಅವರ ಬಂಧನ ಮಾಡಲಾಗಿತ್ತು..

93 ದಿನಗಳ ಬಳಿಕ ಜಾಮೀನು:

93 ದಿನಗಳ ಜೈಲುವಾಸದ ಬಳಿಕ ಜಗದೀಶ್‌ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ ಜೈಲಿನಿಂದ ಬಂದ ಬಳಿಕವೂ ಅವರು ಸರ್ಕಾರದ ವಿರುದ್ಧ ಮತ್ತು ಪೊಲೀಸ್‌ ವ್ಯವಸ್ಥೆ ಮೇಲೆ ಅವರು ಗರಂ ಆಗಿದ್ದಾರೆ.

ಇದರ ಬಗ್ಗೆ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ. ಪಿಎಸ್ ಐ ಹಗರಣವನ್ನು ಬಯಲು ಮಾಡಿದ್ದು, ಎಡಿಜಿಪಿ ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ. ದೊಡ್ಡ ರಾಜಕಾರಣಿಗಳ ಸೆಕ್ಸ್ ಸ್ಕ್ಯಾಡಲ್ ಬಹಿರಂಗಪಡಿಸಿದ್ದು, ರವಿ ಚೆನ್ನಣ್ಣನವರ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು, ಟ್ರಾಫಿಕ್ ಟೋವಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು, ಕೊಡಿಗೆಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ದು ಇವೆಲ್ಲವೂ ನನ್ನ ಹೋರಾಟದ ಭಾಗ ಎಂದಿದ್ದಾರೆ.

ಈ ನನ್ನ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ವ್ಯಕ್ತಿ ಗಳು ಮತ್ತು ಪೊಲೀಸ್ ವ್ಯವಸ್ಥೆ, ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, 25/01/2025 ರಂದು ಸ್ಥಳಿಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ಜಾಮೀನು ಲಭಿಸಿದೆ ಎಂದಿದ್ದಾರೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ! ನಾನು ಶರಣಾಗುವುದಿಲ್ಲ! ಎಂದಿದ್ದಾರೆ.

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading