ಉತ್ತಮ ನಿದ್ರೆಗಾಗಿ ಆಹಾರದ ಮಹತ್ವ
ನಾವು ಆರೋಗ್ಯವಾಗಿರಬೇಕಾದರೆ ಮಾತ್ರ ಆಹಾರ ಮತ್ತು ವ್ಯಾಯಾಮವಷ್ಟೇ ಸಾಕಾಗಲ್ಲ. ಉತ್ತಮ ನಿದ್ರೆಯೂ ಅತ್ಯಗತ್ಯ. ಏಕೆಂದರೆ ನಮ್ಮ ದೇಹ ಮತ್ತು ಮೆದುಳು ನಿದ್ರೆಯ ಸಮಯದಲ್ಲಿ ಪುನಃಶಕ್ತಿಗೊಳ್ಳುತ್ತವೆ. ಆದರೆ ಇತ್ತೀಚೆಗೆ ಹಲವರು ತೊಂದರೆವಿಲ್ಲದೆ ನಿದ್ರೆ ಮಾಡಲು ಪಡುತ್ತಿದ್ದಾರೆ. ನೀವು ಸಹ ನಿದ್ರೆಗಾಗಿ ಹೋರಾಟ ಮಾಡುತ್ತಿದ್ದರೆ, ಈ ಲೇಖನ ನಿಮಗಾಗಿ.
ಈ ಕೆಳಗಿನ ಆಹಾರಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ನೆರವಾಗುತ್ತವೆ:
1. ಬಾದಾಮಿ (Almonds)

ಬಾದಾಮಿಯಲ್ಲಿ ಮೆಲಟೋನಿನ್ ಎಂಬ ನಿದ್ರೆಗೆ ಸಹಕಾರಿ ಹಾರ್ಮೋನ್ ಮತ್ತು ಮೆಗ್ನೇಶಿಯಮ್ ಇರುತ್ತದೆ. ಇದು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.
2. ಡಾರ್ಕ್ ಚಾಕೊಲೇಟ್ (Dark Chocolate)

ಡಾರ್ಕ್ ಚಾಕೊಲೇಟ್‌ನಲ್ಲಿ ಸೆರೋಟೋನಿನ್ ಅಂಶವಿದ್ದು, ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ಶಾಂತಿಯುತ ಮನಸ್ಸು ಉತ್ತಮ ನಿದ್ರೆಗೆ ದಾರಿ ಮಾಡಿಕೊಡುತ್ತದೆ.
3. ಕಿವಿ ಹಣ್ಣು (Kiwi Fruit)

ಕಿವಿ ಹಣ್ಣು ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ C ಮತ್ತು E ನಿಂದ ಸಮೃದ್ಧವಾಗಿದೆ. ಇವು ನಿದ್ರೆಯನ್ನು ಉತ್ತೇಜಿಸಲು ಸಹಾಯಕವಾಗಿವೆ.
4. ಚೆರ್ರಿ ಹಣ್ಣು (Cherries)

ಚೆರ್ರಿಯಲ್ಲಿ ಮೆಲಟೋನಿನ್ ಹೆಚ್ಚು ಪ್ರಮಾಣದಲ್ಲಿದ್ದು, ನಿದ್ರೆಯನ್ನು ಉತ್ತೇಜಿಸಲು ನೆರವಾಗುತ್ತದೆ. ಚೆರ್ರಿ ಜ್ಯೂಸ್ ಕುಡಿಯುವುದೂ ಸಹ ಪರಿಣಾಮಕಾರಿಯಾಗಿದೆ.
5. ಕುಂಬಳಕಾಯಿ ಬೀಜಗಳು (Pumpkin Seeds)

ಇವುಗಳಲ್ಲಿ ಟ್ರಿಪ್ಟೋಫಾನ್, ಮೆಗ್ನೇಶಿಯಮ್ ಹಾಗೂ ಸತುವುಗಳಿದ್ದು, ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಿ ಉತ್ತಮ ನಿದ್ರೆಗೆ ಸಹಕಾರಿಯಾಗುತ್ತವೆ.
6. ಬಾಳೆಹಣ್ಣು (Banana)

ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೇಶಿಯಮ್ ಇರುತ್ತದೆ. ಇವು ಸ್ನಾಯುಗಳನ್ನು ವಿಶ್ರಾಂತಿ ಪಡಿಸುಸಿ ನಿದ್ರೆಗೆ ಅನುಕೂಲವಾಗುತ್ತವೆ.
7. ಬಿಸಿ ಹಾಲು (Warm Milk)

ಟ್ರಿಪ್ಟೋಫಾನ್ ಮತ್ತು ಮೆಲಟೋನಿನ್‌ನಂತಹ ನಿದ್ರೆಗೆ ಸಹಕಾರಿಯಾದ ಅಂಶಗಳು ಹಾಲಿನಲ್ಲಿ ದೊರೆಯುತ್ತವೆ. ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲು ಕುಡಿಯುವುದು ಉತ್ತಮ ನಿದ್ರೆಗೆ ಸಹಕಾರಿ.
ನಾವೂ ಪ್ರತಿದಿನ ಉತ್ತಮವಾಗಿ ಪ್ರತಿಯೊಂದು ಚಟುವಟಿಕೆಗಳಲ್ಲಿಯೂ ಪಾಲ್ಗೋಳಬೇಕಾದರೆ ಮೊದಲು ಚೆನ್ನಾಗಿ ನಿದ್ರೆ ಮಾಡಿರಬೇಕು ..
ಸಲಹೆ: ಮೇಲ್ಕಂಡ ಮಾಹಿತಿ ಸಾಮಾನ್ಯ ಉದ್ದೇಶಕ್ಕಾಗಿ ಮಾತ್ರ. ಯಾವುದೇ ವೈದ್ಯಕೀಯ ತೊಂದರೆಗಳಿಗಾಗಿ ವೈದ್ಯರನ್ನು ಸಂಪರ್ಕಿಸಿ.
