WhatsApp Group Join Now
Telegram Group Join Now
Instagram Group Join Now

ವಿಷ್ಣುವರ್ಧನ್ ಸಮಾಧಿ ನೆಲಸಮ, ಅಭಿಮಾನಿಗಳ ಆಕ್ರೋಶ

Vishnuvardham Grave in Abhiman Studio vandalized, Fans angry

ವಿಷ್ಣುವರ್ಧನ್ ಸ್ಮಾರಕ ತೆರವು – ಅಭಿಮಾನಿಗಳ ಆಕ್ರೋಶ ಅಭಿಮಾನ್ ಸ್ಟುಡಿಯೋ ಮುಂದೆ . ಚಿತ್ರರಂಗದ ದಿಗ್ಗಜ, ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ರಾತ್ರೋರಾತ್ರಿ ತೆರವುಗೊಳಿಸಿರುವ ಘಟನೆ ಅಭಿಮಾನಿಗಳ ಮನಸ್ಸಿಗೆ ಭಾರೀ ನೋವನ್ನುಂಟುಮಾಡಿದೆ.

ಅಭಿಮಾನ್ ಸ್ಟುಡಿಯೋ, ವಿಷ್ಣುವರ್ಧನ್ ಅವರ ಬದುಕಿನ ಹಲವು ನೆನಪುಗಳನ್ನು ಹೊತ್ತ ಸ್ಥಳ. ಇಲ್ಲಿ ಅವರ ಸಮಾಧಿ ಹಾಗೂ ಸ್ಮಾರಕವನ್ನು ನಿರ್ಮಿಸಲಾಗಿತ್ತು. ಅನೇಕ ಅಭಿಮಾನಿಗಳು ಈ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಪ್ರೀತಿಯ ನಟನಿಗೆ ಗೌರವ ಸಲ್ಲಿಸುತ್ತಿದ್ದರು. ಪೂಜೆ ಮಾಡುತ್ತಿದ್ದರು.

ವಿವಾದದ ಹಿನ್ನೆಲೆ ಏನು?

ಅಭಿಮಾನ್ ಸ್ಟುಡಿಯೋ ಬಾಲಣ್ಣ ಅವರ ಕುಟುಂಬದ ಸ್ವತ್ತು. ಬಾಲಣ್ಣನವರ ಕುಟುಂಬವು, ಖಾಸಗಿ ಭೂಮಿಯಲ್ಲಿ ಸ್ಮಾರಕವನ್ನು ನಿರ್ಮಿಸಬಾರದು ಎಂದು ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಹಲವು ಹಂತಗಳ ವಿಚಾರಣೆ ಬಳಿಕ, ನ್ಯಾಯಾಲಯವು ಬಾಲಣ್ಣ ಕುಟುಂಬದ ಪರವಾಗಿ ತೀರ್ಪು ನೀಡಿತು.

ಆದರೂ, ವಿಷ್ಣುವರ್ಧನ್ ಅಭಿಮಾನಿಗಳು ಸ್ಮಾರಕವನ್ನು ಉಳಿಸಿಕೊಳ್ಳಲು ಹೋರಾಟ ಮುಂದುವರಿಸಿದ್ದರು. ಆದರೆ, ಕಳೆದ ರಾತ್ರಿ ಯಾವುದೇ ಮುನ್ನೋಟವಿಲ್ಲದೆ, ಸ್ಮಾರಕವನ್ನು ಸಂಪೂರ್ಣ ತೆರವುಗೊಳಿಸಲಾಯಿತು.

ಅಭಿಮಾನಿಗಳ ಪ್ರತಿಕ್ರಿಯೆ

ಬೆಳಿಗ್ಗೆ ಸ್ಥಳಕ್ಕೆ ಬಂದ ಅಭಿಮಾನಿಗಳು ಸ್ಮಾರಕ ತೆರವುಗೊಂಡಿರುವುದನ್ನು ನೋಡಿ ಆಕ್ರೋಶ ವ್ಯಕ್ತಪಡಿಸಿದರು.

  • “ನಮ್ಮ ಹೀರೋಗೆ ಇಂತಹ ಅವಮಾನ ಮಾಡುವ ಹಕ್ಕು ಯಾರಿಗೂ ಇಲ್ಲ” ಎಂದು ಕೆಲವರು ಆಕ್ರಂದಿಸಿದರು.
  • ಕೆಲ ಅಭಿಮಾನಿಗಳು ಈ ಘಟನೆಯನ್ನು ತಿಳಿದು ನಿಜವಾಗಿಯು ಬೇಸರ ವ್ಯಕ್ತಪಡಿಸಿದ್ದಾರೆ..

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಹೊರಹಾಕುತ್ತಿರುವ ಆಭಿಮಾನಿಗಳು.

ಈ ಘಟನೆ ಕುರಿತಂತೆ #JusticeForVishnuvardhan ಮತ್ತು #AbhimanStudio ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಸಾವಿರಾರು ಅಭಿಮಾನಿಗಳು ತಮ್ಮ ಬೇಸರ, ಕೋಪವನ್ನು ಫೋಟೋ ಹಾಗೂ ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಮುಂದೇನು?

ಅಭಿಮಾನಿ ಸಂಘಟನೆಗಳು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿವೆ. “ನಮ್ಮ ನಟನ ಸ್ಮಾರಕವನ್ನು ಕಾನೂನಾತ್ಮಕವಾಗಿ ಬೇರೆಡೆ ನಿರ್ಮಿಸುತ್ತೇವೆ, ಆದರೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ತೆರವು ಮಾಡಿದ ಕ್ರಮವನ್ನು ನಾವು ಮರೆತೇ ಮರೆವುದು ಇಲ್ಲ” ಎಂದು ಅಭಿಮಾನಿ ಸಂಘದ ಅಧ್ಯಕ್ಷರು ಹೇಳಿದ್ದಾರೆ.

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading