WhatsApp Group Join Now
Telegram Group Join Now
Instagram Group Join Now

ನವೆಂಬರ್ 1 ರಿಂದ ಬ್ಯಾಂಕಿಂಗ್‌ ನಿಯಮದಲ್ಲಿ ಬದಲಾವಣೆ: ಬ್ಯಾಂಕ್‌ ಠೇವಣಿಗಳು, ಲಾಕರ್‌ಗಳಿಗೆ ಬಹು ನಾಮನಿರ್ದೇಶನದ ಆಯ್ಕೆ; ಗ್ರಾಹಕರ ಮೇಲೆ ಪರಿಣಾಮಗಳೇನು?

ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ನಿಯಮಗಳು ನ.1 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಇನ್ನುಮುಂದೆ ಗ್ರಾಹಕರು ಠೇವಣಿ ಖಾತೆಗಳಿಗೆ ಒಬ್ಬರ ಬದಲು ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡಬಹುದು. ಆದರೆ, ಲಾಕರ್‌ಗಳಿಗೆ ಒಬ್ಬರ ನಂತರ ಒಬ್ಬರ ನಾಮನಿರ್ದೇಶನ ಮಾತ್ರ ಸಾಧ್ಯ. ಈ ಬದಲಾವಣೆಗಳು ಗ್ರಾಹಕ ಸ್ನೇಹಿ ಆಗಿದ್ದು, ಅನುಕೂಲ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ.

ನವೆಂಬರ್ 1, 2025 ರಿಂದ ಏನೆಲ್ಲಾ ಬದಲಾವಣೆ

  • ಠೇವಣಿ ಖಾತೆಗಳು, ಸುರಕ್ಷಿತ ಕಸ್ಟಡಿ ವಸ್ತುಗಳು ಮತ್ತು ಸುರಕ್ಷತಾ ಲಾಕರ್‌ಗಳಿಗೆ ಸಂಬಂಧಿಸಿದ ನಾಮನಿರ್ದೇಶನ ಸೌಲಭ್ಯಗಳ ತಿದ್ದುಪಡಿ ನಿಯಮಗಳು ನವೆಂಬರ್ 1, 2025 ರಿಂದ ಜಾರಿಗೆ ಬರಲಿವೆ.
  • “ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ, 2025 ರ ಸೆಕ್ಷನ್ 10, 11, 12 ಮತ್ತು 13 ರಲ್ಲಿರುವ ನಿಬಂಧನೆಗಳು 2025 ರ ನವೆಂಬರ್ 1 ರಿಂದ ಜಾರಿಗೆ ಬರಲಿವೆ” ಎಂದು ಹಣಕಾಸು ಸಚಿವಾಲಯ ತಿಳಿಸಿದೆ
  • ಈ ತಿದ್ದುಪಡಿ ಕಾಯಿದೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಡಳಿತದ ಮಾನದಂಡಗಳನ್ನು ಬಲಪಡಿಸುವುದು, ಠೇವಣಿದಾರರು ಮತ್ತು ಹೂಡಿಕೆದಾರರ ರಕ್ಷಣೆಯನ್ನು ಹೆಚ್ಚಿಸುವುದು ಮತ್ತು ಸುಧಾರಿತ ನಾಮನಿರ್ದೇಶನ ಸೌಲಭ್ಯಗಳ ಮೂಲಕ ಗ್ರಾಹಕರಿಗೆ ಅನುಕೂಲವನ್ನು ಉತ್ತೇಜಿಸುವುದನ್ನು ಒಳಗೊಂಡಿದೆ.

ನಾಮನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ತಿದ್ದುಪಡಿಗಳೇನು

ನವೆಂಬರ್ 1, 2025 ರಿಂದ ಜಾರಿಗೆ ಬರುವ ಪ್ರಮುಖ ನಾಮನಿರ್ದೇಶನ-ಸಂಬಂಧಿತ ಬದಲಾವಣೆಗಳು ಈ ಕೆಳಗಿನಂತಿವೆ:

  1. ಬಹು ನಾಮನಿರ್ದೇಶನ:ಗ್ರಾಹಕರು ಈಗ ತಮ್ಮ ಠೇವಣಿಗಳಿಗಾಗಿ ನಾಲ್ಕು ಜನರನ್ನು ನಾಮನಿರ್ದೇಶನ ಮಾಡಬಹುದು. ಇದು ಅನಿರೀಕ್ಷಿತ ಸಂದರ್ಭಗಳಲ್ಲಿ ಕ್ಲೈಮ್‌ಗಳನ್ನು ಸುಲಭಗೊಳಿಸಲು, ಒಂದೇ ಬಾರಿಗೆ ಅಥವಾ ಒಬ್ಬರ ನಂತರ ಒಬ್ಬರು ಈ ನಾಮನಿರ್ದೇಶನ ಮಾಡಬಹುದು.
  2. ಠೇವಣಿ ಖಾತೆಗಳಿಗೆ ನಾಮನಿರ್ದೇಶನ:ಠೇವಣಿದಾರರು ತಮ್ಮ ಆದ್ಯತೆಗೆ ಅನುಗುಣವಾಗಿ ಒಂದೇ ಬಾರಿಗೆ ಅಥವಾ ಒಬ್ಬರ ನಂತರ ಒಬ್ಬರು ನಾಮನಿರ್ದೇಶನಗಳನ್ನು ಆಯ್ಕೆ ಮಾಡಬಹುದು.
  3. ಸುರಕ್ಷತಾ ಲಾಕರ್‌ಗಳಿಗೆ ನಾಮನಿರ್ದೇಶನ:ಸುರಕ್ಷಿತ ಕಸ್ಟಡಿ ವಸ್ತುಗಳು ಮತ್ತು ಸುರಕ್ಷತಾ ಲಾಕರ್‌ ಸೌಲಭ್ಯಗಳಿಗೆ ಕೇವಲ ಒಬ್ಬರ ನಂತರ ಇನ್ನೊಬ್ಬರ ನಾಮನಿರ್ದೇಶನಗಳನ್ನು ಮಾತ್ರ ಅನುಮತಿಸಲಾಗಿದೆ.
  4. ಒಂದೇ ಬಾರಿಯ ನಾಮನಿರ್ದೇಶನ:ಈ ಆಯ್ಕೆಯ ಅಡಿ ಠೇವಣಿದಾರರು ನಾಲ್ಕು ಜನರ ವರೆಗೆ ನಾಮನಿರ್ದೇಶನ ಮಾಡಬಹುದು. ಪ್ರತಿ ನಾಮಿನಿಯ ಪಾಲನ್ನು ಅಥವಾ ಶೇಕಡಾವಾರು ಹಕ್ಕನ್ನು ಸ್ಪಷ್ಟವಾಗಿ ನಮೂದಿಸಬಹುದು. ಒಟ್ಟು ಪಾಲು 100% ಆಗಿರಬೇಕು. ಇದು ಎಲ್ಲಾ ನಾಮಿನಿಗಳ ನಡುವೆ ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ.
  5. ಉತ್ತರಾಧಿಕಾರಿಯ ನಾಮನಿರ್ದೇಶನ:ಠೇವಣಿಗಳು, ಸುರಕ್ಷಿತ ಕಸ್ಟಡಿಯಲ್ಲಿರುವ ವಸ್ತುಗಳು ಅಥವಾ ಲಾಕರ್‌ಗಳನ್ನು ಹೊಂದಿರುವ ವ್ಯಕ್ತಿಗಳು ನಾಲ್ಕು ಜನರ ವರೆಗೆ ನಾಮಿನಿಗಳನ್ನು ನಿರ್ದಿಷ್ಟಪಡಿಸಬಹುದು. ಇಲ್ಲಿ, ಮೊದಲ ನಾಮಿನಿಯ ಮರಣದ ನಂತರವೇ ಮುಂದಿನ ನಾಮಿನಿಯನ್ನು ಸೂಚಿಸಬಹುದಾಗಿದೆ.

ನಾಮನಿರ್ದೇಶನ ಎಂದರೇನು?

ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, “ಎಲ್ಲಾ ಠೇವಣಿ ಖಾತೆಗಳು, ಸುರಕ್ಷಿತ ಕಸ್ಟಡಿಯಲ್ಲಿರುವ ವಸ್ತುಗಳು ಮತ್ತು ಸುರಕ್ಷತಾ ಠೇವಣಿ ವಾಲ್ಟ್‌ಗಳಿಗೆ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ. ನಾಮನಿರ್ದೇಶನವು ವೈಯಕ್ತಿಕ ಸಾಮರ್ಥ್ಯದಲ್ಲಿ (ಅಂದರೆ, ಏಕ / ಜಂಟಿ ಖಾತೆಗಳು ಹಾಗೂ ಏಕಮಾತ್ರ ಮಾಲೀಕತ್ವದ ಖಾತೆಗಳು) ತೆರೆಯಲಾದ ಖಾತೆಗಳಿಗೆ ಮಾತ್ರ ಲಭ್ಯವಿದೆ. ಅಂದರೆ, ಪ್ರಾತಿನಿಧಿಕ ಸಾಮರ್ಥ್ಯದಲ್ಲಿ ತೆರೆಯಲಾದ ಖಾತೆಗಳಿಗೆ ಅಲ್ಲ.”

ಹೊಸ ನಿಯಮ ಪಾಲನೆಗೆ ಬ್ಯಾಂಕುಗಳಿಗೆ ಸೂಚನೆ

ಈ ನಿಬಂಧನೆಗಳನ್ನು ಎಲ್ಲಾ ಬ್ಯಾಂಕ್‌ಗಳಲ್ಲಿ ಸ್ಥಿರವಾಗಿ ಕಾರ್ಯಗತಗೊಳಿಸಲು, ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು, 2025 ಅನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು. ಈ ನಿಯಮಗಳು ಬಹು ನಾಮನಿರ್ದೇಶನಗಳನ್ನು ಮಾಡುವ, ರದ್ದುಗೊಳಿಸುವ ಅಥವಾ ನಿರ್ದಿಷ್ಟಪಡಿಸುವ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳನ್ನು ಸ್ಪಷ್ಟಪಡಿಸುತ್ತವೆ. ಈ ಕ್ರಮಗಳ ಪರಿಚಯವು ಬ್ಯಾಂಕಿಂಗ್ ವಲಯದಾದ್ಯಂತ ಕ್ಲೈಮ್ ಇತ್ಯರ್ಥದಲ್ಲಿ ಏಕರೂಪತೆ, ಮುಕ್ತತೆ ಮತ್ತು ದಕ್ಷತೆಯನ್ನು ಖಚಿತಪಡಿಸುತ್ತದೆ ಎಂದು ಎಂದು ಸಚಿವಾಲಯ ಹೇಳಿದೆ

Leave a Reply

Discover more from HOME

Subscribe now to keep reading and get access to the full archive.

Continue reading

Discover more from HOME

Subscribe now to keep reading and get access to the full archive.

Continue reading