ನವೆಂಬರ್ 1 ರಿಂದ ಬ್ಯಾಂಕಿಂಗ್ ನಿಯಮದಲ್ಲಿ ಬದಲಾವಣೆ: ಬ್ಯಾಂಕ್ ಠೇವಣಿಗಳು, ಲಾಕರ್‌ಗಳಿಗೆ ಬಹು ನಾಮನಿರ್ದೇಶನದ ಆಯ್ಕೆ; ಗ್ರಾಹಕರ ಮೇಲೆ ಪರಿಣಾಮಗಳೇನು?
ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ ಅಡಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಈ ನಿಯಮಗಳು ನ.1 ರಿಂದ ಜಾರಿಗೆ ಬರಲಿವೆ. ಹೊಸ ನಿಯಮಗಳ ಅನ್ವಯ ಠೇವಣಿದಾರರಿಗೆ ಹೆಚ್ಚಿನ ನಮ್ಯತೆ ನೀಡಲಿವೆ. ಇನ್ನುಮುಂದೆ ಗ್ರಾಹಕರು ಠೇವಣಿ ಖಾತೆಗಳಿಗೆ ಒಬ್ಬರ ಬದಲು ನಾಲ್ಕು ಮಂದಿಯನ್ನು ನಾಮನಿರ್ದೇಶನ ಮಾಡಬಹುದು. ಆದರೆ, ಲಾಕರ್‌ಗಳಿಗೆ ಒಬ್ಬರ ನಂತರ ಒಬ್ಬರ ನಾಮನಿರ್ದೇಶನ ಮಾತ್ರ ಸಾಧ್ಯ. ಈ ಬದಲಾವಣೆಗಳು ಗ್ರಾಹಕ ಸ್ನೇಹಿ ಆಗಿದ್ದು, ಅನುಕೂಲ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ. ನವೆಂಬರ್ 1, 2025 ರಿಂದ…
