ಕನಸು ಕಸಿದ ಡ್ರೀಮ್‌ಲೈನರ್: ಮದುವೆ ಬಳಿಕ ಪತಿಯನ್ನು ಕಾಣಲು ಹೊರಟ ಖುಷ್ಬೂಗೆ ಬದುಕೇ ಅಂತ್ಯ
✈️ ಅಹ್ಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಖುಷ್ಬೂ ರಾಜ್‌ಪುರೋಹಿತ್ ಅವರ ಕಥೆ ಮಾತ್ರವಲ್ಲ, ಪ್ರತಿ ಪ್ರಯಾಣಿಕನೂ ತನ್ನದೇ ಆದ ಭಾವುಕ ಹಿನ್ನೆಲೆಯೊಂದಿಗೇ ಹೊರಟಿದ್ದರು. ಮದುವೆಯ ಬಳಿಕ ಪತಿಯನ್ನು ಮೊದಲ ಬಾರಿ ನೋಡಲು ಹೊರಟ ದುರಂತ ಕಥೆ… ಮಾತ್ರ 5 ತಿಂಗಳ ಹಿಂದಷ್ಟೇ ರಾಜಸ್ಥಾನದಲ್ಲಿ ಖುಷ್ಬೂ ಮತ್ತು ವಿಪುಲ್ ಸಿಂಗ್ ಅವರ ಮದುವೆ ನಡೆದಿತ್ತು. ಪತಿ ವೈದ್ಯರಾಗಿದ್ದು ಲಂಡನ್‌ನಲ್ಲಿ ಉನ್ನತ ಶಿಕ್ಷಣಕ್ಕಾಗಿ ನೆಲೆಸಿದ್ದರು. ಮದುವೆಯ ಬಳಿಕ ಪತಿಯನ್ನು ಕಾಣದ ಖುಷ್ಬೂ, ಎಲ್ಲಾ ದಾಖಲೆ, ವೀಸಾ ಇತ್ಯಾದಿ…
